
“ಔಷಧಿಗಳಿಗೆ ಮಾರ್ಗದರ್ಶನ ಬೇಕು, ಆ್ಯಂಟಿಬಯೋಟಿಕ್‌ಗಳಿಗೆ ವೈದ್ಯರು ಬೇಕು.”
ಆ್ಯಂಟಿಬಯೋಟಿಕ್‌ಗಳು ಯೋಚಿಸದೆ ತೆಗೆದುಕೊಳ್ಳುವ ಔಷಧಿಗಳಲ್ಲ. ವೈದ್ಯರ ಸಲಹೆಯ ಮೇರೆಗೆ ಮಾತ್ರ ಅವುಗಳನ್ನು ಬಳಸಬೇಕು. ಇಂದು ಜನರು ಒಂದು ಮಾತ್ರೆ ತೆಗೆದುಕೊಂಡರೆ ಸಾಕು, ಎಲ್ಲಾ ತೊಂದರೆಗಳೂ ದೂರವಾಗುತ್ತವೆ ಎಂದು ನಂಬಲು ಶುರು ಮಾಡಿದ್ದಾರೆ. ಇದೇ ಕಾರಣಕ್ಕೆ ರೋಗಗಳು ಮತ್ತು ಸೋಂಕುಗಳು ಈ ಆ್ಯಂಟಿಬಯೋಟಿಕ್‌ಗಳಿಗಿಂತ ಬಲಶಾಲಿಯಾಗುತ್ತಿವೆ. ನಿಮ್ಮ ಇಷ್ಟದಂತೆ ಔಷಧಿಗಳನ್ನು ಬಳಸುವುದನ್ನು ತಪ್ಪಿಸಬೇಕೆಂದು ನಿಮ್ಮೆಲ್ಲರಲ್ಲಿ ವಿನಂತಿಸುತ್ತೇನೆ. ಆ್ಯಂಟಿಬಯೋಟಿಕ್‌ಗಳ ವಿಷಯದಲ್ಲಿ ಇದು ಇನ್ನೂ ಮುಖ್ಯ. ನಾನು ಹೇಳುವುದಿಷ್ಟೇ: ಔಷಧಿಗಳಿಗೆ ಮಾರ್ಗದರ್ಶನ ಬೇಕು, ಆ್ಯಂಟಿಬಯೋಟಿಕ್‌ಗಳಿಗೆ ವೈದ್ಯರು ಬೇಕು. ಈ ಅಭ್ಯಾಸ ನಿಮ್ಮ ಆರೋಗ್ಯವನ್ನು ಸುಧಾರಿಸುವಲ್ಲಿ ಬಹಳ ಸಹಾಯಕವಾಗುತ್ತದೆ.













































